|
ಡಿ.ವಿ.ಜಿ ತಮ್ಮ ಅವಧಿಯಲ್ಲಿ ಪರಿಷತ್ತನ್ನು ಕರ್ನಾಟಕ ಸಾಹಿತ್ಯ ಪ್ರಪಂಚದ
ಕೇಂದ್ರ ಸ್ಥಳವನ್ನಾಗಿ ಮಾಡಲು ಬಹುಮುಖ ಪ್ರಯತ್ನ ಮಾಡಿದರು. ಪ್ರತಿ ವಾರವೂ
ಪರಿಷತ್ತಿನಲ್ಲಿ ಯಾವುದಾದರೊಂದು ಸಾರ್ವಜನಿಕ ಕಾರ್ಯಕ್ರಮ, ಭಾಷಣ,
ಕಾವ್ಯವಾಚನ ನಡೆಯುವಂತೆ ವ್ಯವಸ್ಥಯಾಯಿತು.
1915
ರಲ್ಲಿ ಸ್ಥಾಪಿತವಾದ ಪರಿಷತ್ತನ್ನು
‘ಕರ್ನಾಟಕ
ಸಾಹಿತ್ಯ ಪರಿಷತ್ತು’
ಎಂದೇ ಕರೆಯಲಾಗುತ್ತಿತ್ತು.
ನಿಬಂಧನಾವಳಿಯಲ್ಲೂ ಇದೇ ಪ್ರಯೊಗವಿತ್ತು. ಆದರೆ, ಕನ್ನಡ ನಾಡಿನಲ್ಲಿ
ಕರ್ನಾಟಕ, ಕರ್ಣಾಟಕ ಎಂಬೆರಡು ಪ್ರಯೋಗಗಳು ಬಳಕೆಯಲ್ಲಿದ್ದವು. ಮೈಸೂರು
ಪ್ರಾಂತ್ಯದಲ್ಲಿ ‘ಕರ್ನಾಟಕ’
ಪದವೂ, ಮುಂಬಯಿ
ಪ್ರಾಂತ್ಯದಲ್ಲಿ ‘ಕರ್ನಾಟಕ’
ಪದವೂ ಬಳಕೆಯಾಗುತ್ತಿತ್ತು. ಆರಂಭದಲ್ಲಿ ಪರಿಷತ್
ಪ್ರಕಟಿಸುತ್ತಿದ್ದ ಪರಿಷತ್ಪತ್ತಿಕೆಯನ್ನು ‘ಕರ್ನಾಟಕ
ಸಾಹಿತ್ಯ ಪರಿಷತ್ಪತ್ತಿಕೆ’ ಎಂದು
ಮುದ್ರಿಸಲಾಗುತ್ತಿತ್ತು. 25
ನೇ ಸಂಪುಟದ ಮೊದಲ
ಸಂಚಿಕೆಯನ್ನು ಅಂದರೆ 1918
ರ ಏಪ್ರೀಲ್ ಸಂಚಿಕೆಯನ್ನು
‘ಕರ್ನಾಟಕ ಸಾಹಿತ್ಯ ಪರಿಷತ್ಪತ್ತಿಕೆ’
ಎಂದು ಮುದ್ರಿಸಲಾಯಿತು. ಆನಂತರದಲ್ಲಿ ಣ, ನ ಅಕ್ಷರ ಬಳಕೆ ಬಗೆಗೆ
ನಾಡಿನಾದ್ಯಂತ ಚರ್ಚೆ ನಡೆಯಿತು. ಜಿ.ಪಿ. ರಾಜರತ್ನಂ ಈ ಬಗೆಗೆ ಒಂದು
ಅಣಕಿನ ಪದ್ಯವನ್ನು ಬರೆದರು. ಈ ವಿಷಯವಾಗಿ ಮುಂಬಯಿ, ಮೈಸೂರು ಪ್ರಾಂತ್ಯಗಳ
ಪಂಡಿತರುಗಳೊಂದಿಗೆ ಚರ್ಚೆ ನಡೆಸಿದ ಬಿ.ಎಂ.ಶ್ರೀ ಸಂಸ್ಥೆಯ ಹೆಸರನ್ನು
‘ಕನ್ನಡ ಸಾಹಿತ್ಯ ಪರಿಷತ್’
ಎಂದು ಬದಲಿಸಲು ಎಲ್ಲರ ಮನವೊಲಿಸಿದರು. ಕನ್ನಡದ ಕಣ್ವ ಬಿ.ಎಂ.ಶ್ರೀ ಇಟ್ಟ
ಹೆಸರೇ ನಂತರ ಸ್ಥಿರವಾಗಿ ಉಳಿಯಿತು.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕ್ರತಿ, ಇತಿಹಾಸ ಇವುಗಳ
ರಕ್ಷಣೆ ಹಾಗೂ ಅಭಿವೃದ್ದಿಯ ಮುಖ್ಯ ಉದ್ದೇಶದಿಂದ
1915
ರಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು.
ಈ ದಿನಗಳಲ್ಲಿ ಯಾರೇ ಆಗಲಿ, ಕನ್ನಡ ಸಾಹಿತ್ಯ ಪರಿಷತ್ ಅಂದರೆ ಅದು
ಚಾಮರಾಜಪೇಟೆಯಲ್ಲಿದೆ ಅಂದು ಬಿಡುತ್ತಾರೆ. ಆದರೆ, ಈ ಸಾಹಿತ್ಯ ಪರಿಷತ್
ಆರಂಭವಾದ ಹಿನ್ನಲೆ ಬೆಳೆದು ಬಂದ ಬಗೆ ಇದೆಯಲ್ಲ ಅದೊಂದು ರೋಚಕ –
ಸ್ವಾರಸ್ಯಕರ ಕಥೆ.
ಕರ್ನಾಟಕ ಈಗಿರುವಂತೆ ಸಂಘಟಿತವಾಗುವುದಕ್ಕೆ ಮೊದಲು ಕನ್ನಡದ ಜನ
ಭಿನ್ನ ಭಿನ್ನ ಆಡಳಿತ, ಘಟಕಗಳ ಹಿಡಿತದಲ್ಲಿದ್ದರು.
ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವ ಬಿದ್ದು,
ಉಚ್ಛಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು.
ಪರಿಣಾಮ, ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚರಂತೆ ವ್ಯವಹರಿಸುವ
ಅಸ್ವಾಭಾವಿಕ ಪರಿಸ್ಥತಿ ಉಂಟಾಗಿತ್ತು.
ಇದನ್ನು ತಪ್ಪಿಸಲು ವಿವಿಧ ಭಾಗಗಳಲ್ಲಿರುವ ಕನ್ನಡಿಗರನ್ನು
ಒಂದುಗೂಡಿಸಬೇಕೆಂದೇ ಅಂದಿನ ದಿವಾನರಾಗಿದ್ದ ಸರ್.ಎಂ.
ವಿಶ್ವೇಶ್ವರಯ್ಯನವರು ‘ಮೈಸೂರು
ಸಂಪದಭ್ಯುದಯ’ ಸಮಾಜ
ರಚಿಸಿದರು.
ಕನ್ನಡ ಭಾಷೆ, ಕನ್ನಡದ ಜನರ ಸ್ವಾಭಿಮಾನ ಕಾಯುವಿಕೆಯನ್ನೇ ಪರಮ
ಗುರಿಯಾಗಿಸಿಕೊಂಡಿದ್ದ ಸಂಪದಭ್ಯುದಯ ಸಮಾಜ ತನ್ನ ಮೊದಲ ವಾರ್ಷಿಕ
ಅಧಿವೇಶನದಲ್ಲಿ ‘ಕರ್ನಾಟಕ
ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವುದರ ಪ್ರೋತ್ಸಾಹಕ್ಕಾಗಿ
ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರಕಾರದವರು ಆ
ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡಲು ಮುಂದಾಗಬೇಕು’
ಎಂಬ ನಿರ್ಣಯ ಕೈಗೊಂಡಿತು.
ಈ ನಿರ್ಣಯಕ್ಕೆ ಸರಕಾರ ಸಮ್ಮತಿ ಸೂಚಿಸದಿದ್ದೇ ತಡ, ತಕ್ಷಣವೇ
ಕನ್ನಡ ನಾಡು-ನುಡಿಯ ಮಹತ್ವ ಸಾರುವ ಪುಸ್ತಕವೊಂದನ್ನು ಬಿಡುಗಡೆ ಮಾಡುವುದು
ಹಾಗೂ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಸಮ್ಮೇಳನ ನಡೆಸುವುದೆಂದೂ
ಸಂಪದಭ್ಯುದಯ ಸಮಿತಿ ನಿರ್ಧರಿಸಿತು.
ಅದರಂತೆ, ಅಂದಿನ ದಿನಗಳಲ್ಲಿ ರಾಜಮಂತ್ರ ಪ್ರವೀಣ ಎಂದೇ ಖ್ಯಾತರಾಗಿದ್ದ
ಎಚ್.ವ್ಹಿ. ನಂಜುಡಯ್ಯನವರ ಅಧ್ಯಕ್ಷರ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
1915
ರ ಮೇ 3
ರಿಂದ
7
ವರೆಗೆ ಅದ್ಧೂರಿಯಾಗಿ ನಡೆದೇ ಹೋಯಿತು.
ಸಮ್ಮೇಳನದ 3
ನೇ ದಿನ ಅಂದರೆ 1915
ರ ಮೇ
5
ರಂದು ಪರಿಷತ್ ಸ್ಥಾಪನೆ ಕುರಿತ ವಿಷಯವೇ ಚರ್ಚೆಯ ಪ್ರಧಾನ
ವಸ್ತುವಾಗಿತ್ತು.
ಕನ್ನಡ ಭಾಷೆ, ಸಂಸ್ಕ್ರತ್ತಿಯ ಉಳಿವಿಗೆ ಸಾಹಿತ್ಯ ಪರಿಷತ್
ಸ್ಥಾಪನೆ ಅನಿವಾರ್ಯವೆಂದು ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ
ಅಭಿಪ್ರಾಯಪಟ್ಟರು. ಅಂದೇ ಕನ್ನಡಿಗರ ಅಭಿಮಾನದ
ಪರಿಷತ್ ‘ಕನಾರ್ಟಕ
ಸಾಹಿತ್ಯ ಪರಿಷತ್ತು’ ಹೆಸರಿನಲ್ಲಿ
ಅಸ್ತಿತ್ವಕ್ಕೆ ಬಂತು. ಸಹಸ್ರಾರು ಕನ್ನಡಿಗರ ಬಹುಕಾಲದ ಕನಸು ನನಸಾಯಿತು.
ಡಿವಿಜಿಯವರ ನಂತರ ಪರಿಷತ್ತಿನ ಉಪಾಧ್ಯಕ್ಷರಾದ
ಬಿ.ಎಂ.ಶ್ರೀಕಂಠಯ್ಯನವರು ಪರಿಷತ್ತಿನಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸುವ
ಸಲುವಾಗಿ 1938
ರಲ್ಲಿ ಮಹಿಳಾ ಶಾಖೆ ಆರಂಭಿಸಿದರು.
ಕನ್ನಡ ನಾಡಿನ ನಕ್ಷೆಯುಳ್ಳ ಪರಿಷತ್ತಿನ ಲಾಂಛನ ರೂಪಿಸಿದ್ದರು.
ಪರಿಷತ್ ನ ಕಾರ್ಯಚಟುವಟಿಕೆಯ ಬಗ್ಗೆ ಅರವು ಮೂಡಿಸುವ, ಕನ್ನಡದ
ಅಭಿಮಾನ ಸಾರುವ
‘ಕನ್ನಡ ನುಡಿ’
ಹೆಸರಿನ ವಾರಪತ್ರಿಕೆ ಆರಂಭಿಸಿ ಕನ್ನಡದ ಕಟ್ಟಾಳು
ಎಂದೇ ಹೆಸರಾಗಿದ್ದ ಅ.ನ.ಕೃಷ್ಣರಾಯರನ್ನು ಅದರ ಪ್ರಧಾನ ಸಂಪಾದಕರಾಗಿ
ನೇಮಿಸಿದರು.
ಆರಂಭದಲ್ಲಿ ವಾರಪತ್ರಿಕೆಯಾಗಿದ್ದ
‘ಕನ್ನಡ ನುಡಿ’
ನಂತರ ಪಾಕ್ಷಿಕವಾಗಿ;
ತದನಂತರ ‘ಮಾಸಿಕ’
ವಾಗಿ ಬದಲಾಯಿತು.
1931
ರ ಏಪ್ರೀಲ್ 12
ರಂದು ಸಾಹಿತ್ಯ ಪರಿಷತ್ ಭವನ ನಿರ್ಮಾಣದ ಶಂಕುಸ್ಥಾಪನಾ ಕಾರ್ಯ
ಆರಂಭವಾಯಿತು.
ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಕರ್ಪೂರ ಶ್ರೀನಿವಾಸರಾರು ತಮ್ಮ
ಮನೆಯದೇ ಕೆಲಸ ಎನ್ನುವಷ್ಟರ ಮಟ್ಟಿಗೆ
ಮುತುವರ್ಜಿವಹಿಸಿದ್ದರಿಂದ ರಡು ವರ್ಷಗಳ ಅಲ್ಪ ಅವಧಿಯಲ್ಲಿ
ಸಾಹಿತ್ಯ ಪರಿಷತ್ ನ ಭವ್ಯ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಎಂಬ
ಹೆಸರಿನಲ್ಲಿ ತಲೆಯೆತ್ತಿ ನಿಂತಿತು.
ಪರಿಷತ್ ನ ಕಾರ್ಯಾಲಯ ಬಾಡಿಗೆ ಕಟ್ಟಡದಿಂದ ಸ್ವಂತ ಮನೆಗೆ ಬಂದಂದಿನಿಂದ
ಅದರ ಕಾರ್ಯ ಚಟುವಟಿಕೆಗಳು ಬಹುಮುಖವಾಗಿ ವಿಸ್ತಾರಗೊಂಡವು.
ಅದಕ್ಕೊಂದು ಹೊಸ ರೂಪ, ವ್ಯಕ್ತಿತ್ವ ಬಂತು.
ಪರಿಷತ್ತು ಕೆಲವೇ ಮಂದಿ ಪಂಡಿತರ ಕೂಟ ಭಾವನೆ ತೊಲಗಿ ಅದು
ಜನಸಾಮಾನ್ಯರೂ ಹೋಗಿ ಮಾತುಕತೆ ನಡೆಸಬಹುದಾದ ತಾಣ ಎಂಬ ಭಾವನೆ ಬೆಳೆಯಿತು.
1933
ರಲ್ಲಿ ಪರಿಷತ್ ನ ಉಪಾಧ್ಯಕ್ಷರಾಗಿ ನೇಮಕವಾದ ಡಿ.ವಿ.ಜಿ ತಮ್ಮ ಅವಧಿಯಲ್ಲಿ
ಪರಿಷತ್ತನ್ನು ಕರ್ನಾಟಕ ಸಾಹಿತ್ಯ ಪ್ರಪಂಚದ ಕೇಂದ್ರ ಸ್ಥಳವನ್ನಾಗಿ ಮಾಡಲು
ಬಹುಮುಖ ಪ್ರಯತ್ನ ಮಾಡಿದರು. ಪ್ರತಿ ವಾರವೂ
ಪರಿಷತ್ತಿನಲ್ಲಿ ಯಾವುದಾದರೊಂದು ಸಾರ್ವಜನಿಕ ಕಾರ್ಯಕ್ರಮ, ಭಾಷಣ,
ಕಾವ್ಯವಾಚನ ನಡೆಯುವಂತೆ ವ್ಯವಸ್ಥಯಾಯಿತು.
ಈ ಬದಲಾವಣೆಯ ಹಿಂದೆಯೇ ಪರಿಷತ್ತಿನ ಸದಸ್ಯರ ಸಂಖ್ಯೆ ಮೂರು ಪಟ್ಟು
ಹೆಚ್ಚಿತು.
ಕನ್ನಡ ಸಾಹಿತ್ಯ ಪರಿಷತ್ತು ಮಹತ್ವದ ಬೆಳವಣಿಗೆಗಳೊಂದಿಗೆ ಸಾಗಿ
ಹೋಗುತ್ತ, ಜನಮನದಲ್ಲಿ ಸ್ಥಿರವಾಗಿ ನೆಲೆ ನಿಂತ
ಸಂದರ್ಭದಲ್ಲೆ 1956
ರಲ್ಲಿ ವಿಸ್ತೃತ ಮೈಸೂರು ರಾಜ್ಯದ ರಚನೆಯಾಗಿ
ಕನ್ನಡ ರಾಜ್ಯೋದಯವಾಯಿತು. ಆನಂತರದಲ್ಲಿ
ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಚಟುವಟಿಕೆಯ ರೀತಿ-ನೀತಿಯೂ
ಬದಲಾಯಿತು.
ಹಳೆಗನ್ನಡ ಕಾವ್ಯಗಳ ಗದ್ಯಾನುವಾದ, ಜೀವನ ಚರಿತ್ರೆ, ವಿಜ್ಞಾನ,
ಮಕ್ಕಳ ಸಾಹಿತ್ಯ, ಜನಪದ ಸಾಹಿತ್ಯ, ಕಾವ್ಯ, ಕಲೆ, ಪರಿಶೋಧನೆ, ಕನ್ನಡೇತರರ
ಕೈಪಿಡಿ, ಭಾಷಾಂತರ ಗ್ರಂಥಗಳು, ಉದಯೋನ್ಮುಖರ ಕೃತಿಗಳು ಹೀಗೆ ಹಲವು
ಪುಸ್ತಕಗಳ ಪ್ರಕಟಣೆಯೊಂದಿಗೆ ಕನ್ನಡ ಭಾಷಾಭಿವೃದ್ಧಿಗೆ ಅಗತ್ಯವಿರುವ
ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಷತ್ ನ ಕಾರ್ಯಕಾರಿ ಸಮಿತಿ
ನಿರ್ಧರಿಸಿತು. ಅಧ್ಯಕ್ಷರ ಆಯ್ಕೆಗೆ
ಚುನಾವಣಾ ಪದ್ಧತಿಯೂ ಕಾರ್ಯಕಾರಿ ಸಮಿತಿ ನೇಮಕಕ್ಕೆ ಸರಕಾರದ ನಿರ್ಧಾರವೂ
ಅಂತಿಮದ್ದೆಂದೂ, ಅದೇ ಸಂದರ್ಭದಲ್ಲಿ ಗೊತ್ತುವಳಿ ಮಂಡಿಸಲಾಯಿತು.
ನಂತರದ ದಿನಗಳಲ್ಲಿ ಪರಿಷತ್ತು ಸಾಗಿ ಬಂದಿರುವ ಹಾದಿ ಎಲ್ಲರಿಗೂ
ತಿಳಿದೇ ಇದೆ.
Designed by District Administration
and SahityaSmmelanaSamiti,gadag
|