ಕನ್ನಡ ಭಾಷೆಯ ವಿಕಾಸ
ಪರಿಚಯ
ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ
ಬಳಸಲಾಗುತ್ತಿದೆ.
ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦
ವರ್ಷಗಳ ಹಿಂದೆಯೇ ಇದ್ದಿತು. ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ
ದ್ರಾವಿಡ ನುಡಿಗಳನ್ನು ಹೋಲುತ್ತದೆ. ನಂತರದ ಶತಮಾನಗಳಲ್ಲಿ ಕನ್ನಡ
ನುಡಿಯಲ್ಲಿ,
ಸಂಸ್ಕೃತ/ಸಕ್ಕದ,
ಪ್ರಾಕೃತ,
ಮರಾಠಿ ಮತ್ತು
ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ
ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು
ಶುರುವಾಯಿತು.
ಕನ್ನಡ ಭಾಷೆಯ ಮಾತನ್ನಾಡಲ್ಪಡುವ (ಆಡುಮಾತು)
ಮತ್ತು ಬರೆಯಲ್ಪಡುವ (ಬರಹ) ರೂಪಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ
(ಆಗುವುದು-->ಆಗುತ್ತೆ, ಆಗುವುದಿಲ್ಲ-->ಆಗಲ್ಲ, ಇತ್ಯಾದಿ). ಮಾತನ್ನಾಡುವ
ಶೈಲಿ, ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳುತ್ತದೆಯಾದರೂ (ಮಂಗಳೂರು
ಕನ್ನಡ,
ಧಾರವಾಡ ಕನ್ನಡ ಇತ್ಯಾದಿ) ಬರವಣಿಗೆಯಲ್ಲಿ
ಕರ್ನಾಟಕದಾದ್ಯಂತ ಕನ್ನಡ ಭಾಷೆ ಸರಿಸುಮಾರು ಏಕರೂಪವಾಗಿದೆ. ಸುಮಾರು
ಇಪ್ಪತ್ತು ಕನ್ನಡದ ಉಪಭಾಷೆಗಳು ಗುರುತಿಸಲ್ಪಟ್ಟಿವೆ.
ಕನ್ನಡವು
ದಕ್ಷಿಣ ಭಾರತದ ಮೂಲಭಾಷೆ
ದ್ರಾವಿಡ.ತಮಿಳು ಭಾಷೆಯು
ದ್ರಾವಿಡ ಭಾಷೆಯಿಂದ ಬೆರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ
ಬೆರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦
ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಕನ್ನಡವು ಮೊದಮೊದಲು ಇತರ
ದ್ರಾವಿಡ ಭಾಷೆಗಳಂತೆ ಸಂಸ್ಕೃತ ಭಾಷೆಯಿಂದ ಸ್ವತಂತ್ರವಾಗಿ ಬೆಳೆಯಿತು
ಇದಕ್ಕೆ ಸಾಕಷ್ಟು ಪ್ರಮಾಣಗಳು ಲಭ್ಯವಿದೆ. ನಂತರದ ಶತಮಾನಗಳಲ್ಲಿ ಕನ್ನಡವು
ಭಾರತದ ಮತ್ತಿತರ (ತೆಲಗು,
ಮಲಯಾಳ ಇತ್ಯಾದಿ) ಭಾಷೆಗಳಂತೆ
ಸಂಸ್ಕೃತದ ಸಾಹಿತ್ಯಕ ಹಾಗೂ ಶಬ್ದಾವಳಿಯ
ಪ್ರಭಾವಕ್ಕೊಳಗಾಯಿತು ಎಂಬುದೂ ಇದುವರೆಗೆ ಕೇವಲ ಊಹೆ ಮಾತ್ರ.
ಕಳೆದ ಶತಮಾನದಲ್ಲಿ ಆಗಿರುವ ಅತಿವ್ಯಾಪಕವಾದ
ಕನ್ನಡದ ಅಭಿವೃದ್ಧಿಯನ್ನು ಗಮನಿಸಿದರೆ ೨೦ನೆಯ ಶತಮಾನದಿಂದ ಈಚಿನ
ಕಾಲವನ್ನು ಆಧುನಿಕ ಕನ್ನಡ ಎಂದು ಹೊಸ ಯುಗವಾಗಿ ಪರಿಗಣಿಸಬೇಕಾಗುತ್ತದೆ.
ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯಲು ಅರ್ಹವಾಗಿದೆ.
ಅಂತರ್ಜಾಲದಲ್ಲಿ ಕನ್ನಡ ಭಾಷೆಯನ್ನು ಯಥೆಚ್ಛವಾಗಿ
ಉಪಯೋಗಿಸಲಾಗುತ್ತಿದೆ...
ಕನ್ನಡ ಭಾಷೆ ಮತ್ತು ಕನ್ನಡ ಅಂಕಿಗಳ
ಬೆಳವಣಿಗೆ
ಕುಮುದೇಂದು ಮುನಿ ರಚಿಸಿದ
'ಸಿರಿ ಭೂವಲಯ' ಗ್ರಂಥದ
ಆಧಾರದಿಂದ ಕನ್ನಡ ಭಾಷೆ ಗುಪ್ತಭಾಷೆಯಾಗಿದ್ದಿತು(ಬ್ರಹ್ಮರ್ಷಿ ದೇವರಾತರ
ಪ್ರಕಾರ ವೇದ ಕಾಲದಿಂದಲೂ ೪ ಗುಪ್ತ ಭಾಷೆಗಳಿವೆಯಂತೆ ಅದರಲ್ಲಿ ಕನ್ನಡ
ಭಾಷೆಯೂ ಒಂದು ಎಂದು ಅನಿಸುತ್ತದೆ) ಸೊನ್ನೆಯಿಂದಲೇ ಎಲ್ಲಾ ಅಂಕಿಗಳನ್ನು
ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ
ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಕುಮುದೇಂದು
ಮುನಿಯು ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾರೆ.
ಉದಾಹರಣೆಗೆ: ಣಿಚ್ಚವು ಹೊಸದಾಗಿರುವಂಕಾಕ್ಷರ
ದಚ್ಚುಗಳೊಳಗೊಂಬತ್ತು ಣೊಚ್ಚಿತ್ತು
ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್ ಣುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ
ಲೆಕ್ಕವ ತರುವ ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ
ಜನರಿಗನಾದಿ ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ
ಅರವತ್ನಾಲ್ಕಕ್ಷರವಿತ್ತ ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು
ಸೊನ್ನೆ ಸಹಿತ ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ
ಏಳೆಂಟೊಂಬತೆಂಬ ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂ ದೆನ್ನುವುದನು
ಕಲಿಸಿದನು ಸರ್ವಜ್ಞ ದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ
ಭಾಷೆಯ ಸರಣಿಗೆ ಸಕಲವ ಕರ್ಮಾಟದಣುರೂಪ
ಹೊಂದುತ ಪ್ರಕಟದ ಓಂದರೋಳ್ ಅಡಗಿ ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ
ಭಾಷೆಗಳೇಳುನೂರು ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ
ಹುಟ್ಟಿ ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ
ಭೌಗೋಳಿಕ ವ್ಯಾಪಕತೆ
ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ
ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು
ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ಸಹ ಉಪಯೋಗಿಸಲಾಗುತ್ತದೆ.
ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು
ಇಂಗ್ಲೆಂಡ್ ದೇಶಗಳಲ್ಲಿ ಸಹ ಸಾಕಷ್ಟು
ಕನ್ನಡಿಗರ ಜನಸಂಖ್ಯೆ ಇದೆ. ಇ೦ದು ಕನ್ನಡಹು
ಮಲ್ಲಿಗೆಯ೦ತೆ ಅರಳಿ ತನ್ನ ಕ೦ಪನ್ನು ಯೆಲ್ಲೆಡೆಯು ವ್ಯಾಪಿಸಿದೆ ಈ ಕ೦ಪು
ಮಲಿನಗೊಳ್ಳದ೦ತೆ ತಡೆಯುಹುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಅಧಿಕೃತ ಮಾನ್ಯತೆ ಮತ್ತು "ಚೆನ್ನುಡಿ"
ಕನ್ನಡ ಭಾಷೆ
ಭಾರತ ದೇಶದ ೨೨
ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ
ಒಂದು.
ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ.
ಕರ್ನಾಟಕದಲ್ಲಿ ಕನ್ನಡಿಗರೇ ಆದ್ಯತೆ. ಅದರಲ್ಲೂ ಬೆಂಗಳೂರಲ್ಲಿ ಕನ್ನಡ
ಹಿತರಕ್ಷಣೆಗಾಗಿ ಕನ್ನಡಪರ ಸಂಘಟನೆಗಳ ಹೋರಾಟ ನಿಜಕ್ಕೂ ಶ್ಲಾಘನೀಯ. ಅಕ್ಟೋಬರ್ ೩೧,
೨೦೦೮ ರನ್ದು ಭಾರತ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು
ನೀಡಿದೆ. ಶಾಸ್ತ್ರೀಯ ಭಾಷೆಗೆ
ಕನ್ನಡದಲ್ಲಿ "ಚೆನ್ನುಡಿ" ಎಂದೂ ಕರೆಯಬಹುದು.
ಕನ್ನಡ ಅಕ್ಷರಮಾಲೆ
ಮುಖ್ಯ ಲೇಖನ:
ಕನ್ನಡ ಅಕ್ಷರಮಾಲೆ
ಕನ್ನಡ ಅಕ್ಷರಮಾಲೆಯಲ್ಲಿ ೪೯
ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ
ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿಸುಮಾರು ಎಲ್ಲ ಭಾರತೀಯ
ಭಾಷೆಗಳಲ್ಲಿ ಬರುತ್ತವೆ.
ತೆಲುಗು ಲಿಪಿ ಕನ್ನಡ ಭಾಷೆಯ ಲಿಪಿಯನ್ನು
ಹೋಲುತ್ತದೆ, ಮತ್ತು ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು
ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ
ಮಾತ್ರೆಯನ್ನು ಪ್ರತಿನಿಧಿಸುತ್ತದೆ.
ಆಂಗ್ಲ (ಇಂಗ್ಲೀಷ್)
ಮೊದಲಾದ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು
ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ. ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ
ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರಲಿಪಿಯಿಂದ ಹಿಡಿದು
ಇಂದಿನ ಮುದ್ರಣ— ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ.
ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳ ಬ್ರಾಹ್ಮೀಲಿಪಿಯೇ
ಮೂಲ. ಶತಮಾನಗಳು ಕಳೆದ ಮೇಲೆಯೂ ಈಗ ಕನ್ನಡದ ಅಕ್ಷರಗಳು
ಬ್ರಾಹ್ಮೀಲಿಪಿಯಿಂದ ಹೇಗೆ ಬೆಳೆದು ಬಂದಿವೆ ಎಂಬುದನ್ನು ಕ್ರಮವಾಗಿ
ವಿವರಿಸಬಹುದು. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ
ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇದರಿಂದ ಅಕ್ಷರಗಳು
ಬದಲಾದ ಸ್ವರೂಪವನ್ನು ಪಡೆದ ಕ್ರಮವನ್ನು ನಾವು ಕಣ್ಣಾರೆ ಕಾಣಬಹುದು.
ಮುದ್ರಣ ಬಂದ ಮೇಲೆ ಕನ್ನಡಕ್ಕೆ ಈಗಿನ ರೂಪ ನಿಂತಿದೆ. ಪ್ರಪಂಚದಲ್ಲಿ ೧೮
ಬಗೆಯ ಲಿಪಿಗಳಿವೆ. ಇವುಗಳಲ್ಲಿ ೮ ಅಕ್ಷರ ಲಿಪಿಗಳು. ಮಿಕ್ಕವು ಚಿತ್ರಲಿಪಿ
ಮುಂತಾದವು. ಭಾರತದಲ್ಲಿ ಅನೇಕ ಭಾಷೆಗಳಿಗೆ ಬ್ರಾಹ್ಮಿಲಿಪಿಯಿಂದ ಬಂದ ಅನೇಕ
ಲಿಪಿಗಳೇ ಇವೆ. ಜೊತೆಗೆ ಪರ್‍ಸೋ-ಅರಾಬಿಕ್ ಲಿಪಿಗಳೂ ಇವೆ. ಉದಾ: ಉರ್ದು, ಕಾಶ್ಮೀರಿ, ಪುಷ್ಟು. ಕನ್ನಡ ವರ್ಣಮಾಲೆಯಲ್ಲಿ ಇರಬೇಕಾದ ಅಕ್ಷರಗಳ ಬಗ್ಗೆ
ವಿದ್ವಾಂಸರಲ್ಲಿ ಬೇಕಾದಷ್ಟು ಚರ್ಚೆಯಾಗಿದೆ. ಕೊನೆಯದಾಗಿ ಈಗ ಕನ್ನಡದ
ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ
ಈಚೆಗೆ ಇಂಗ್ಲಿಷಿನ F, Z ಎಂಬ ಧ್ವನಿಯನ್ನು ಫ಼ ಜ಼
ಎಂಬಂತೆ ಗುರುತಿಸುತ್ತ ಇದ್ದಾರೆ. ಆಗ ೫೩.
ಕನ್ನಡ ಕಾಗುಣಿತ
ಮುಖ್ಯ ಲೇಖನ:
ಕನ್ನಡ ಕಾಗುಣಿತ
ಕನ್ನಡ ಕಾಗುಣಿತವು ಪ್ರತಿಯೊಂದು
ವ್ಯಂಜನಗಳಿಗೂ ಪ್ರತಿಯೊಂದು ಸ್ವರವನ್ನು ಸೇರಿಸುವುದು ಹೇಗೆ ಎಂದು
ತಿಳಿಸಿಕೊಡುವ ವ್ಯಾಕರಣದ ಕ್ರಮ. ಉದಾ: ಅ
ಸ್ವರವನ್ನು ಸ್
ವ್ಯಂಜನಕ್ಕೆ ಸೇರಿಸಿದಾಗ, ಸ
ಬರುತ್ತದೆ. ಓ
ಸ್ವರವನ್ನು ರ್
ವ್ಯಂಜನಕ್ಕೆ ಸೇರಿಸಿದಾಗ, ರೋ
ಬರುತ್ತದೆ. ಒಂದು ವ್ಯಂಜನದ ಸಂಪೂರ್ಣ ಕಾಗುಣಿತ, ಆ ವ್ಯಂಜನದ
ಎಲ್ಲಾ ಸ್ವರಗಳೊಂದಿಗಿನ ಸಂಬಂಧವನ್ನು ತೋರಿಸುತ್ತದೆ. ಉದಾ: ನ
ಕಾಗುಣಿತ -> ನ ನಾ ನಿ ನೀ ನು ನೂ ನೆ ನೇ ನೈ ನೊ ನೋ ನೌ ನಂ ನಃ ऌ,ॡ
ಇವುಗಳನ್ನೂ ಕನ್ನಡದಲ್ಲಿ ಸ್ವರಗಳೆಂದು ಸೇರಿಸಿಕೊಳ್ಳುತ್ತಾರೆ.
'ನೋಡಿ
ಕೇಶಿರಾಜನ ಶಬ್ದಮಣಿದರ್ಪಣ'.
ಲಿಪ್ಯಂತರಣ
ಕನ್ನಡ ಅಕ್ಷರಗಳನ್ನು
ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು
ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ
INSCRIPT,
ITRANS,
ಬರಹ ಮತ್ತು
ನುಡಿ.
ಕರ್ನಾಟಕ ಸರ್ಕಾರದ ಅಧಿಕೃತ
ಲಿಪ್ಯಂತರಣ ವಿಧಾನ
ನುಡಿ.
INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ ಗ್ನೋಮ್ ಬಳಸುವ
ಎಲ್ಲಾ ಕಾರ್ಯಾಚರಣ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.
|
||
|
||