hp amnt_link ki ks
kksp gdg_ksp abkss_btn sad
ssjp dps   

ಗದಗ ಜಿಲ್ಲೆಯ ಸಂಕ್ಷಿಪ್ತ ಸಾಹಿತ್ಯ ದರ್ಶನ

 

 

 

ಗದಗ ಜಿಲ್ಲೆ ಸಾಹಿತ್ಯ, ಸಂಗೀತ, ಸಂಸ್ಕ್ರತಿ, ಕಲೆಯ ಪ್ರತಿರೂಪವಾಗಿದ್ದು, ಇದು ಸಂಗೀತ ಸರಸ್ವತಿ, ಸಾಹಿತ್ಯ ಬ್ರಹ್ಮರಿರುವ ಊರೆಂದು ಪ್ರಸಿದ್ಧಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.  ಕನ್ನಡ ಸಾಹಿತ್ಯದ ಪ್ರಥಮ ಲಿಖಿತ ರೂಪ ಆರಂಭವಾದದ್ದು ಹಲ್ಮಿಡಿ ಶಾಸನ ದಿಂದ ಗದಗ ಜಿಲ್ಲೆಯ ಸಾಹಿತ್ಯ ಪರಂಪರೆ ಕೂಡಾ ಮೊದಲ್ಗೊಂಡುದು ಶಾಸನದಿಂದಲೇ ಎಂಬುದು ವಿಶೇಷ.  ಗದಗ ಜಿಲ್ಲೆಯು ಸಾಹಿತ್ಯ, ಕಲೆ, ಸಂಸ್ಕ್ರತಿ ಮತ್ತು ಇತಿಹಾಸದ ವೈಭವ ಐತಿಹಾಸಿಕ ಪರಂಪರೆಯಲ್ಲೇ ಒಂದು ಶ್ರೇಷ್ಠತೆಯನ್ನು ಪಡೆದುಕೊಂಡಿದೆ.  1961 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈ ವಿಜೃಂಭಣೆಯಿಂದ ನಡೆಯಿತು. ಗದಗ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದೆ. ಇದೀಗ 2010 ರಲ್ಲಿ ಜಿಲ್ಲೆಯಾದ  ಪ್ರಥಮಸಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜರುಗುತ್ತಿರುವದು ಗದಗಿನ ಜನತೆಗೆ ಹರ್ಷ ತಂದಿದೆ.

 

        ಗದಗ ತಾಲೂಕಿಗೆ ಸಂಬಂಧಿಸಿದಂತೆ ಸಾಹಿತಿಗಳ ಸಂಕ್ಷಿಪ್ತ ವಿವರ:

1.       ಗದಗ ಸಮೀಪವಿರುವ ನಾರಾಯಣಪೂರ ಗ್ರಾಮದವರಾದ ಸಾಹಿತ್ಯ ಬ್ರಹ್ಮ ಮಹಾಕವಿಯೆಂದು ಪ್ರಖ್ಯಾತಿ ಪಡೆದ ಚಾಮರಸರವರು ರಚಿಸಿದ ಪ್ರಭುಲಿಂಗಲೀಲೆ ಕನ್ನಡದ ಅದ್ವೀತಿಯ ಸಮಗ್ರ ಕಾವ್ಯ.

2.      ಗದುಗಿನ ಸಮೀಪವಿರುವ ಮುಳಗುಂದದ ನಯಸೇನ ರಚಿಸಿದ ಧರ್ಮಾಮೃತ ಎಂಬ ಕಾವ್ಯ ಇದು ಜೈನ ಕಥಾಕೋಶವಾಗಿದ್ದು, ಈತನಿಗೆ ಸನ್ನುತ ಕವಿ ಎಂದು ಕರೆದರು.

3.      ಮುಳಗುಂದದವರಾದ ಕವಿರತ್ನ ಪಂಡಿತ ಮಲ್ಲಸೇನ ಸೂರಿ ಉಭಯ ಭಾಷಾ ಕವಿಯಾಗಿದ್ದರು.

4.      ಮುಳಗುಂದದವರಾದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು ಉತ್ತಮ ಸಾಹಿತ್ಯ ವಚನಕಾರರಾಗಿದ್ದರು.  ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಕೈವಲ್ಯದರ್ಪಣ. ಭಾವಗೀತೆಗಳು ಇವರ ಉತ್ತಮ ಕೃತಿಯಾಗಿದೆ.

5.      12 ನೇ ಶತಮಾನದಲ್ಲಿಯ ಲಕ್ಕುಂಡಿಯ ಪ್ರಸಿದ್ಧ ವಚನಕಾತಿ ಮುಕ್ತಾಯಕ್ಕ ಮತ್ತು ಅಜಗಣ್ಣ ಇವರು ಅನೇಕ ವಚನಗಳನ್ನು ಬರೆದರು.

6.      ಗದುಗಿನ ಹತ್ತಿರದಲ್ಲಿರುವ ಬೆಟಗೇರಿಯ ಸಿದ್ಧಮಲ್ಲಾರ್ಯ ಇವರು ದೇವಾಂಗ ಪುರಾಣ ರಚಿಸಿದರು.  ಇನ್ನೊಬ್ಬ ಕವಿ ದಾನಪ್ವಾರ್ಯ ಶಿವಸಂವಾದಿನಿ ಎಂಬ ದ್ವಿಪದಿ ಕಾವ್ಯ ರಚಿಸಿ ಕನ್ನಡ ಸಾರಸ್ವತವನ್ನು ಲೋಕಕ್ಕೆ ನೀಡಿದರು.

7.      ಗದುಗಿನ ಸಮೀಪವಿರುವ ಕುರ್ತಕೋಟಿಯವರಾದ ನರಸಿಂಹ ಇವರು ಅನುಭವ ಚಿಂತಾಮಣಿ ರಚಿಸಿದ್ದಾರೆ.

8.      ಸಾಹಿತ್ಯ ಪ್ರಪಂಚದಲ್ಲಿಯೇ ಅತ್ಯಂತ ಪ್ರಮುಖವಾಗಿ ಶ್ರೇಷ್ಠ ಕವಿ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದೆನಿಸಿಕೊಂಡ ಗದುಗಿನ ಸಮೀಪದ ಕೋಳಿವಾಡ ಗ್ರಾಮದ ಕುಮಾರವ್ಯಾಸ ಭಾರತವನ್ನು ಆಧರಿಸಿ ಕಾವ್ಯ ರಚಿಸಿದ ಕರ್ಣಾಟಕ ಭಾರತ ಕಥಾ ಮಂಜರಿ ಭಾಮಿನೀ ಷಟ್ಪದಿಯ ಛಂದಸ್ಸನ್ನು ಸಮರ್ಥವಾಗಿ ಬಳಸಿ ಯಶಸ್ವೀ ಕಾವ್ಯ ನೀಡಿದ ಕೀರ್ತಿಯೂ ಈತನಿಗೆ ಸಲ್ಲುತ್ತದೆ.  ತನ್ನ ಕಾವ್ಯದಲ್ಲಿ ರೂಪಕ ಅಲಂಕಾರವನ್ನು ಧಾರಾಳವಾಗಿ ಬಳಸಿ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಪ್ರಸಿದ್ಧಿ ಪಡೆದಿರುತ್ತಾನೆ.

9.      ಗದುಗಿನ ಅತೀ ಸಮೀಪವಿರುವ ಲಕ್ಕುಂಡಿ ಕ್ಷೇತ್ರದ ಗತವೈಭವದ ಇತಿಹಾಸವನ್ನು ಹಾಗೂ ದಾನಚಿಂತಾಮಣಿ ಅತ್ತಿಮಬ್ಬೆಯ ಚರಿತ್ರೆಯನ್ನೊಳಗೊಂಡ ಕ್ಋತಿಯನ್ನು ಡಾ.ಹಂಪ ನಾಗರಾಜಯ್ಯ ಇವರು ಕವಿವರ ಕಾಮದೇನು ಎಂಬ ಕ್ಋತಿ ರಚಿಸಿದ್ದಾರೆ.  ದಾನಚಿಂತಾಮಣಿ ಅತ್ತಿಮಬ್ಬೆ ಸಾಂಸ್ಕ್ಋತಿಕ ಪರಂಪರೆ ಬೆಳೆಸಲು ಶ್ರಮಿಸಿದ ಮಹಾನ ಸಾಹಿತ್ಯವಲ್ಲಭ, ಸಾಹಿತ್ಯ ಪ್ರೇರಕ ಮಾತೆಯ ಪ್ರೇರಣೆಯಿಂದ ಮಹಾಕವಿ ರನ್ನ ಅಜಿತ ತೀರ್ಥಂಕರರ ಪುರಾಣ ರಚಿಸಿದರು.  ಅತ್ತಿಮಬ್ಬೆಯು ಅನೇಕ ಸುಪ್ರಸಿದ್ಧ ಕವಿಗಳಿಗೆ ಆಶ್ರಯದಾತೆ, ಪ್ರೋತ್ಸಾಹದಾಯಿನಿಯಾಗಿದ್ದಳು.

 

10.   ಗದುಗಿನ ಕೋಟಿ ಬಸಪ್ಪ ಶಾಸ್ತ್ರಿಗಳು ಷಡಕ್ಷರ ದೇವನ ಸ್ತೋತ್ರಮಂಜರಿ ಗ್ರಂಥವನ್ನು ರಚಿಸಿದ್ದಾರೆ.

11.   ಗದುಗಿನ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಪೂಜ್ಯರು ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳು ಅನೇಕ ಕೃತಿಗಳನ್ನು, ನಾಟಕಗಳನ್ನು ರಚಿಸಿದ್ದಾರಲ್ಲದೇ ನಾಲ್ಕು ಭಾಷೆಗಳಲ್ಲಿ ಸಾಹಿತ್ಯ ರಚಿಸಿರುವುದರಿಂದ ಸಕಲ ವಲ್ಲಭನೆಂದು ಪ್ರಖ್ಯಾತಿ ಹೊಂದಿದ್ದಾರೆ.

12.   ನಾರಾಯಣರಾವ ಕೃಷ್ಣರಾವ ಹುಯಿಲಗೋಳರು ಆಧುನಿಕ ಸಾಹಿತ್ಯದ ಪ್ರಮುಖರಲ್ಲಿ ಗಣ್ಯರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಪ್ರಸಿದ್ಧ ನಾಡಗೀತೆಯನ್ನು ರಚಿಸಿದ್ದಾರೆ. ಹಾಗೂ ಅನೇಕ ನಾಟಕ, ಕವನ, ದೇಶಭಕ್ತಿಗೀತೆಗಳನ್ನು ಬರೆದಿದ್ದಾರೆ.

13.   ಗದಗ ತಾಲೂಕು ಹೊಂಬಳ ಗ್ರಾಮದ ಖ್ಯಾತ ಕವಿ ಚನ್ನವೀರ ಕಣವಿ ರವರು ಅನೇಕ ಕವನ ಸಂಕಲನ ಹಲವು ಕ್ಋತಿಗಳನ್ನು ರಚಿಸಿದ್ದು, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕ್ಋತರು.

14.   ಗದುಗಿನ ಕೀರ್ತಿನಾಥ ಕುರ್ತಕೋಟಿ ಇವರು ವಿಮರ್ಶಕರು, ನಾಟಕಕಾರರು ಇವರ ನಡೆದು ಬಂದ ದಾರಿ ಶ್ರೇಷ್ಠ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.

15.   ಗದಗ ಸಮೀಪದ ಅಣ್ಣಿಗೇರಿಯವರಾದ ಶ್ರೀ ಬಿ.ಆರ್. ವಾಡಪ್ಪಿ (ಭಾರತೀಶ) ರವರು ಅನೇಕ ನಾಟಕ, ಪ್ರಬಂಧ, ಕಥೆಗಳನ್ನು ಬರೆದಿದ್ದಾರೆ.  ಇವರ ತಾರಕಂಟಿ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

16.   ಗದುಗಿನವರಾದ ರಾಮಚಂದ್ರ ಕುಲಕರ್ಣಿ ರಾ.ಕು. ಎಂದೇ ಪ್ರಸಿದ್ಧರಾದ ಲಲಿತ ಪ್ರಬಂಧಕಾರರು ಇವರ ಗಾಳಿಪಟ ಶ್ರೇಷ್ಠ ಲಲಿತ ಪ್ರಬಂಧ.

17.   ಗದುಗಿನ ಪ್ರೊ. ಎಂ.ಎಚ್. ಹರಿದಾಸ ಅವರು ಲಕ್ಕುಂಡಿ ಶಿಲ್ಪಕಲೆ ದೇಗುಲಗಳು ಶಾಸನಗಳನ್ನು ಆಧಾರವಾಗಿಟ್ಟುಕೊಂಡು ಲಕ್ಕುಂಡಿಯ ಕಲೆಯ ಬೆಲೆ ಎಂಬ ಕೃತಿ ರಚಿಸಿದ್ದಾರೆ.

 

ನರಗುಂದ ತಾಲೂಕಿಗೆ ಸಂಬಂಧಿಸಿದಂತೆ ಸಾಹಿತಿಗಳ ಸಂಕ್ಷಿಪ್ತ ವಿವರ.

ನರಗುಂದ ಒಂದು ಸಾಹಿತ್ಯ ಕ್ಷೇತ್ರ

 

1.      ನರಗುಂದದವರಾದ ಶ್ರೀಧರಾಚಾರ್ಯ ಇವರ ಶ್ರೇಷ್ಠ ಕೃತಿಯಾದ ಜಾತಕ ತಿಲಕ ಎಂಬ ಜ್ಯೋತಿಷ್ಯ ಗ್ರಂಥವನ್ನು ರಚಿಸಿದ್ದಾರೆ. ಇವರ ಇನ್ನೊಂದು ಕೃತಿ ಚಂದ್ರಪ್ರಭ ಚರಿತೆ, ಜೈನ ಪುರಾಣ ಕಾವ್ಯ ರಚಿಸಿದ್ದಾರೆ.

2.      ಜೀವಾಜಿ ವಿಷ್ಣುಗೋಠೆ ಜಾನ್ಸನ್ನನು ೂಲತಃ  ನರಗುಂದದವರು ಇವರು ರಾಸೇಲಾಸ್ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದಿರುವುದಲ್ಲದೇ ಸುಮಾರು 1 ಕೃತಿಗಳನ್ನು ರಚಿಸಿದ್ದಾರೆ.

 

ಶಿರಹಟ್ಟಿ ತಾಲೂಕಿಗೆ ಸಂಬಂಧಿಸಿದಂತೆ ಸಾಹಿತಿಗಳ ಸಂಕ್ಷಿಪ್ತ ವಿವರ.

1.       ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ಆಚಣ್ಯನೆಂಬ ಜ್ಐನ ಕವಿ ವರ್ಧಮಾನ ಪುರಾಣವೆಂಬ ಚಂಪೂ ಕಾವ್ಯವನ್ನು ಬರೆದಿದ್ದಾನೆ.

2.      ಲಕ್ಷ್ಮೇಶ್ವರದ ಮಹಾಲಿಂಗನು ಏಕೋತ್ತರ ಶತಸ್ಥಲ ಎಂಬ ಕೃತಿಯನ್ನು ಬರೆದಿದ್ದಾನೆ.

3.      ಲಕ್ಷ್ಮೇಶ್ವರದ ಪರಮ ಭಕ್ತನೆಂಬ ಕವಿ ವಾರ್ಧಕ ಷತ್ಪದಿಯಲ್ಲಿ ಘೋರಾಸುರಯುದ್ಧ ಎಂಬ ಗ್ರಂಥವನ್ನು ರಚಿಸಿದ್ದಾನೆ.

4.      ವರಕವಿ ದ.ರಾ. ಬೇಂದ್ರೆ ಅವರು ಮೂಲತ ಶಿರಹಟ್ಟಿಯವರು ಇವರು ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ ಆಧುನಿಕ ಕವಿಗಳಲ್ಲಿ ಒಬ್ಬರು.

5.      ಶಿರಹಟ್ಟಿ ತಾಲೂಕ ಲಕ್ಷ್ಮೇಶ್ವರದ (ಪುಲಿಗೆರೆಯ) ಜೈನನ ಕವಿ ಆಚಣ್ಣ ಈತನ ಕೃತಿ ವರ್ಧಮಾನ ಪುರಾಣ ಈತನ ಇನ್ನೊಂದು ಕಾವ್ಯ ಶ್ರೀ ಪದಾತೀತಿ ಇದು ಪಂಚ ನಮಸ್ಕಾರದ ಮಹಿಮೆಯನ್ನು ಹೇಳುವ ಕಂದ ಪದ್ಯವಾಗಿದೆ.

6.      ಪುಲಗೆರೆ ಸೋಮ ಈತನು ಸೋಮೇಶ್ವರ ಶತಕವೆಂಬ ಉತ್ಕ್ರಷ್ಟ ಗ್ರಂಥ ರಚನೆ ಮಾಡಿದ್ದಾನೆ.  ಇದೊಂದು ನೀತಿ ಬೋಧನಾ ಕಾವ್ಯವಾಗಿದೆ.

7.      ಪುಲಿಗೆರೆಯ ಸುರಂಗ ಕವಿ ತ್ರಿಷಷ್ಟಿಪುರಾತನಂ ಈತನ ಕೃತಿ.  ಈತನಿಗೆ ಕರ್ನಾಟಕ ಕವಿ ಚಕ್ರವರ್ತಿ ಎಂಬ ಬಿರುದು ಪಡೆದಿದ್ದಾನೆ.

 

ರೋಣ ತಾಲೂಕಿಗೆ ಸಂಬಂಧಿಸಿದಂತೆ ಸಾಹಿತಿಗಳ ಸಂಕ್ಷಿಪ್ತ ವಿವರ.

    

1.       11 ನೇ ಶತಮಾನದ ಮಹಾಕವಿ ದುರ್ಗಸಿಂಹ ಚಾಲುಕ್ಯ ದೊರೆ ಜಗದೇಕಮಲ್ಲನ ಆಸ್ಥಾನದಲ್ಲಿ ಸಂಧಿ ವಿಗ್ರಹಿಯಾಗಿದ್ದನು.  ಮೂಲತ ಈತನು ರೋಣ ತಾಲೂಕ ಸವಡಿ ಗ್ರಾಮದವನು.  ಈತನ ಕೃತಿ ಪಂಚತಂತ್ರ ಇದು ಐದು ಆಧಿಕರಣದಿಂದ ಕೂಡಿದೆ.  1. ಭೇದ ಪ್ರಕರಣ ವರ್ಣ ನಂ.2 ಪರೀಕ್ಷಾವ್ಯಾ ವರ್ಣನಂ 3.  ಅವಿಶ್ವಾಸ ಪ್ರಕರಣ ವರ್ಣನಂ 4. ವಂಚನಾ ಪ್ರಕರಣ ವರ್ಣನಂ 5. ಮಿತ್ರರಾರ್ಯ ಪ್ರಕರಣಂ, ಭಟ್ಟನ ಸಂಸ್ಕ್ರತಿ ಪಂಚತಂತ್ರದ ಕೆಲವು ಭಾಗ ಚಂಪೂ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾನೆ.  ಹಾಗ ಮೊಲಂ   ಸಿಂಹಮಂ ಕೊಂದ ಕಥೆ, ಶಿವಭೂತಿಯ ಕಥೆ ಇನ್ನೂ ಅನೇಕ ಕೃತಿಗಳನ್ನು ರಚಿಸಿದ್ದಾರೆ.

2.      ಸವಡಿ ಗ್ರಾಮದವನಾದ ಹಳೆಗನ್ನಡ ಕವಿಗಳಲ್ಲಿ ಕಂಡು ಬರುವ 1ನೇ ನಾಗವರ್ಮ ಇವನ ಎರಡು ಕೃತಿಗಳು. 1. ಛದೋಂಬುಧಿ 2. ಕರ್ನಾಟಕ ಕಾದಂಬರಿ ಈ ಕೃತಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಥಮ ಅನುವಾದಿತ ಶೃಂಗಾರ ರಸವುಳ್ಳ ಕೃತಿಯೆಂದು ಖ್ಯಾತಿ ಪಡೆದಿದೆ.

3.      ನರೇಗಲ್ಲ ಗ್ರಾಮದವರಾದ ಶಿವಬಸಪ್ಪ ಶಾಸ್ತ್ರಿ ಇವರು ಬಸವಪವಾಡ ಲೀಲಾಮ್ರತ ಕಾವ್ಯ ರಚಿಸಿದನು.

4.      ನಿಡಗುಂದಿಯವರಾದ ಸಂ.ಶೀ. ಭೂಸನೂರಮಠರವರ ಮಹಾಕಾವ್ಯ ಭವ್ಯಮಾನವ ಶೂನ್ಯ ಸಂಪಾದನೆಯ ಪರಾಮರ್ಶೆ ಇವರ ಇನ್ನೊಂದು ಶೈಲಿ.

5.     ಅಬ್ಬಿಗೇರಿಯವರಾದ ಡಾ. ಗಿರಡ್ಡಿ ಗೋವಿಂದರಾಜ ರಸವಂತಿ ಕವನ ಸಂಕಲನ, ಆ ಮುಖ ಈ ಮುಖ ಸಣ್ಣ ಕಥೆಗಳ ಕವನ ಸಂಕಲನ ಹಾಗೂ ಅನೇಕ ವಿಮರ್ಶೆ ಲೇಖನಗಳನ್ನು ಬರೆದಿದ್ದಾರೆ. ಇದೇ ಗ್ರಾಮದ ಇನ್ನೊಬ್ಬ ಸಾಹಿತಿ ಡಾ. ಸೋಮಶೇಖರ ಇಮ್ರಾಪುರ ಇವರು ಜಾನಪದ ಶೈಲಿಯಲ್ಲಿ ಕಾವ್ಯ ರಚನೆ, ಅನೇಕ ಒಗಟುಗಳನ್ನು ರಚಿಸಿದ್ದಾರೆ.

 

ಮುಂಡರಗಿ ತಾಲೂಕಿಗೆ ಸಂಬಂಧಿಸಿದಂತೆ ಸಾಹಿತಿಗಳ ಸಂಕ್ಷಿಪ್ತ ವಿವರ.

1.      ಐತಿಹಾಸಿಕವಾಗಿ ಪ್ರಸಿದ್ಧವಾದ ಮುಂಡರಗಿ ತಾಲೂಕ ಗದಗ ಜಿಲ್ಲೆಯ ಒಂದು ಚಿಕ್ಕ ತಾಲೂಕ.   ಈ ತಾಲೂಕಿಗೆ ಸಂಬಂಧಿಸಿದಂತೆ ಸಾಹಿತಿಗಳ ಸಂಕ್ಷಿಪ್ತ ವಿವರ.

2.      ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದವನಾದ ವೆಣ್ಣಿಯ ಭಟ್ಟ ಘನ ವಿದ್ವಾಂಸನಾಗಿದ್ದನು.   ಉಭಯ ಭಾಷೆ ಕವಿಯೆಂದು, ಕವಿರಾಜ ವಲ್ಲಭನೆಂದು ಖ್ಯಾತಿ ಪಡೆದಿದ್ದನು.

3.      ಮುಂಡರಗಿಯ ಕವಿ ಮೇವುಂಡಿ ಮಲ್ಲಾರಿಯವರು ಕನ್ನಡ ನಾಡಿನ ಕೆಲವು ಶಾಸನಗಳು ಎಂಬ ಪುಸ್ತಕ ರಚಿಸಿದ್ದಾರೆ.

4.      ಮುಂಡರಗಿಯ ಪೇಠಾಲೂರ ಗ್ರಾಮದವರಾದ ಶ್ರೀಯುತ ಎಚ್.ಎನ್. ಹೂಗಾರ ರವರು 100 ಕ್ಕಿಂತ ಹೆಚ್ಚು ನಾಟಕಗಳನ್ನು ರಚಿಸಿ ನಾಟ್ಯ ಕಲಾ ಭೂಷಣ ಪ್ರಶಸ್ತಿ ಪಡೆದಿದ್ದಾರೆ.

5.      ಮುಂಡರಗಿಯ ಪ್ರೊ. ವ್ಹಿ.ಬಿ. ಹಿರೇಮಠ ಇವರು ಕವಿಗಳಾಗಿ, ಕಥಾಕಾರರಾಗಿ, ಜೀವನ ಚರಿತ್ರೆಕಾರರಾಗಿ, ವಿಮರ್ಶಕರಾಗಿ ಮುಂಡರಗಿಯ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ.

6.      ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದ ಪ್ರೊ. ಎಸ್.ಆರ್. ಗೌಡರ ಅವರು ಜನಪದ ಸಾಹಿತ್ಯದಲ್ಲಿ ಹಂತಿ ಪದಗಳು ಸೊಗಸು ಎಂಬ ಕೃತಿ ರಚಿಸಿದ್ದು ಸಾವಿರದಾ ಒಂದು ಜನಪದ ತ್ರಿಪದಿಗಳನ್ನು ರಚಿಸಿದ್ದಾರೆ.   ಅನೇಕ ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ.

7.      ಮುಂಡರಗಿಯ ಅನ್ನದಾನಿ ಬಸವಲಿಂಗಾರ್ಯ ಇವರ ಸಟೀಕಾ ರಾಜಶೇಖರ ತ್ರತೀಯಾಶ್ವಾಸವು ಎಂಬ ಕೃತಿ ರಚಿಸಿದ್ದಾರೆ.

8.      ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ದಶಮಪೀಠಾಧಿಕಾರಿಗಳಾದ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಇವರು ಮೂಲತಃ  ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಪೀಠಾಪೂರ ಗ್ರಾಮದವರು ಸಾಹಿತ್ಯ ಸಮಾಜದ ಪ್ರತಿಬಿಂಬ ಎಂಬ ಆದರ್ಶವನ್ನಿಟ್ಟುಕೊಂಡು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ಇವರು ಒಬ್ಬರು.  ಇವರು ಕವಿಗಳು, ಸಾಹಿತಿಗಳು, ವಿಮರ್ಶಕರು, ನಾಟಕಕಾರರು, ಚರಿತ್ರೆಕಾರರು, ವ್ಯಾಖ್ಯಾನಕಾರರು, ವಚನಕಾರರು ಹಾಗೂ ನೂರಾರು ಸಂಶೋಧನಾತ್ಮಕ ಲೇಖನಗಳನ್ನು ಹಾಗೂ ಅನೇಕ ಮೌಲಿಕ ಕೃತಿಗಳನ್ನು ರಚಿಸಿದವರೊಂದಿಗೆ ಆಧುನಿಕ ಸಾಹಿತ್ಯ ಲೋಕದಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡಿದ್ದಾರೆ.  ಇವರು ತ್ರಿಭಾಷಾ ಪಂಡಿತರು, ಕಾವ್ಯತೀರ್ಥ ಪದವಿ ಪಡೆದು ಸಾಹಿತ್ಯ ವಿಶಾರದ ಸಾಹಿತ್ಯ ರತ್ನ ಉಪಾದಿಗಳನ್ನು ಹೊಂದಿ ಸಂಸ್ಕ್ರ ವೇದಾಂತ ಶಾಸ್ತ್ರಿ ಪದವಿಯನ್ನು ಪಡೆದವರು.

 9. ಮುಂಡರಗಿಯ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕ್ಷೇತ್ರ, ಗದಗ ಜಿಲ್ಲೆಯಾದ ನಂತರ ಪ್ರಥಮ ಜಿಲ್ಲಾ ಸಾಹಿತ್ಯ ಸಮ್ಮೇಳನ ಜನೇವರಿ-2000 ರಂದು ನಡೆದ ಸ್ಥಳ.

 

ಗದಗ ಜಿಲ್ಲೆಯ ಸಾಹಿತ್ಯವನ್ನು ಕಾಲಾನುಕ್ರಮವಾಗಿ ಶಾಸನ ಸಾಹಿತ್ಯ, ಹಳಗನ್ನಡ ಸಾಹಿತ್ಯ , ನಡುಗನ್ನಡ ಸಾಹಿತ್ಯ ಹಾಗೂ ಹೊಸಗನ್ನಡ ಸಾಹಿತ್ಯವೆಂದು ವಿಭಾಗಿಸಬಹುದು.  ಆದಿ ಕಾಲದಿಂದ ಹಿಡಿದು ಈಗಲೂ ಸಾಹಿತ್ಯದ ದೃಷ್ಟಿಯಿಂದ ಅತೀ ಮಹತ್ವ ಪಡೆದ ಸ್ಥಳ ಗದಗ ಜಿಲ್ಲೆಯಾಗಿದೆ.

 

 

Designed by District Administration and SahityaSmmelanaSamiti,gadag